Wednesday, 20 April 2011

ಮಾನಗೆಟ್ಟವರು!!!!

ದೇಶದಾದ್ಯಂತ ಹಬ್ಬಿರುವ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿ ನಿಂತ ಅಣ್ಣಾ ಹಜಾರೆ'ಯವರ ಜನಲೋಕಪಾಲ ಮಸೂದೆಯ ಗತಿ ಏನಾಗಬಹುದು? ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಅದು ಹುಟ್ಟುವ ಮೊದಲೇ ಕತ್ತುಹಿಸುಕಿ ಕೊಲ್ಲಬಹುದು, ಇಲ್ಲವೇ ಹಲ್ಲುಕಿತ್ತ ಹಾವಾಗಬಹುದು.
ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದ ದಾರಿ ತಪ್ಪಿಸಲು ಲಜ್ಜೆಗೇಡಿ ರಾಜಕಾರಣಿಗಳು ಮಾಡುತ್ತಿರುವ ಕುತಂತ್ರಗಳು/ಕಸರತ್ತುಗಳು ಹೇಸಿಗೆ ತರಿಸುತ್ತಿವೆ. ಜನಹಿತಕ್ಕಿಂತ ತಮ್ಮ ಹಾಗೂ ಹಿಂಬಾಲಕರ ಹಿತವೇ ಮುಖ್ಯ ಎಂಬುದು ಇಲ್ಲಿ ಎದ್ದು ಕಾಣುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಜನಲೋಕಪಾಲ ಮಸೂದೆಯ ಮಂಡನೆಯೂ ಅಸಾಧ್ಯವೆನ್ನುವಂತಹ ಜನಹಿತ ವಿರೋಧಿ ಹೇಳಿಕೆಗಳು ಹೊರಬರುತ್ತಿವೆ.
ಲೋಕಪಾಲ ಮಸೂದೆ ಕರಡು ಸಮಿತಿಯ ಸದಸ್ಯರಾಗಿರುವ ಕೇಂದ್ರದ ಮಂತ್ರಿವರೇಣ್ಯರು ಬಹಿರಂಗವಾಗಿ ಬಾಯಿಗೆ ಬಂದ ಹಾಗೆ ಮಾತಾನಾಡುತ್ತಿರುವುದನ್ನು ಕಂಡೂ ಕಾಣದ ರೀತಿಯಲ್ಲಿ ಕುಳಿತಿರುವ ಯುಪಿಎ ಅಧ್ಯಕ್ಷೆ ಸೋನಿಯಾ(G) ವರ್ತನೆಯಲ್ಲಿ ಜಾಣಕುರುಡು ಕಾಣಬಹುದು.
ಮಾನಗೆಟ್ಟ ರಾಜಕಾರಣಿಗಳು, ದುಡ್ಡಿಗಾಗಿ ಓಟು ಹಾಕುವ ಜನರಿರುವವರೆಗೂ ಭ್ರಷ್ಟಾಚಾರ ಓಡಿಸುವದು ಕೈಲಾಗದ ಮಾತು..
ಏನಂತೀರಾ?